Balakara Sarvajanika Sri Sharada Mahotsava Samithi

About Us

Balakara Sharada Samithi

It was on the holy day of Navarathri in the humble  cowshed of ‘GuruKripa’ house that the Balakara Sharada Samithi was born in 1967 in Urva Chilimbi in Mangaluru. The ‘Abhimanyu’ Shaka of the Rashtriya Swayamsevak Sangh was the motivating force behind the establishment of the Samithi. This event was a testimony to the reverence and piety of the few youngsters who had joined together to establish this Samithi which is now in its 57th year.  These youngsters were guided by the elders with experiential inputs on holding poojas and other religious rituals connected with the Sharada Mathotsava.  The Samithi organised  Bhajan sessions and various other religious functions well attended by the people of the locality.

Soon, due to the continuous mentoring  and guidance of the elders the Samithi began holding the Sharada Mahotsava in a grander scale. The Photo of the Sharada Matha was replaced by a bigger than life size idol and the idol was named ‘Balakara Sharade’ The Samithi also got bigger and renamed as ‘Balakara Shri Sharada Mahotsava Samithi’.  Since then the Sharada Mahotsava Samithi has grown from strength to strength and attained the full form of an organisation and successfully instilled many virtues in the people of  Chilimbi.

Philanthropists of the area have donated a plot of 2.5 cents in the middle of the Chilimbi town where the imposing building of the Sharada Nikethana now stands. The devotees of Mangaluru and from other far flung places have generously donated for bringing up this building.  The foundation stone for this building was laid in 1996. The Sharada Nikethana has spurred many social and religious activities to the delight of the local devotees.

Inauguration

The inauguration of the Sharada Nikethan building was performed by the Dharmadhikari of Shri Kshetra Dharmasthala Dr. D Veerendra Heggade which is a milestone in the life of the Sharada Nikethan and its devotees. The committee even now cherishes the golden words of  Dr.Heggade. He had exhorted the committee to start a school in the Sharada Nikethan since it was children who had begun this odyssey. The committee carried it out and today the Sharda Vidyanikethan is running a nursery school giving education of little children. The school was started in 1998 which alleviated the anxiety of the parents for sending their children to schools in far away places.
The school also grew from strength to strength in a short time due to the encouragement of the local people and the selfless service of the teachers and the school maintenance committee. Apart from the curriculum of the schools extracurricular activities like yoga, classical dance, devotional music and sports are regularly held.  The students of the area were also imparted with information and awareness on environment, patriotism and other virtues. Tales of great men and women of India, patriots are told to the students. They are also made part of the festivals of the various communities along with awareness about the festivals and their importance to the society. During the ten day festival of Navarathri and Vijayadashami the people of Chilimbi and the neighbouring areas take part in the cultural programmes organised by the school and performed by the school children. The annual day celebrations of the school is also held during the Navarathri celebrations which add more importance and and reverence to the festival of Navarathri.

Sharada Mahila Mandali

January 25th of 1998 is also a memorable day in the life of Sharada Nikethan group of organisations, for on that day Sharada Mahila Mandali came into existence. Under the guidance of the elders of the town a consultative committee was formed and was inaugurated by Smt. M Savithri Vittal Rao.
Ever since its inception the Sharada Mahila Mandali hosts many programmes that are socially oriented and programmes that empower women in many ways including health, Yoga and eye care camps. In addition, many skill development and self employment projects like candle making, soap making, artificial Jewellery making, tailoring and fashion designing and many other programmes were organized for the purpose of making women economically empowered. Due to this initiative many women of not only Chilimbi but also the adjoining places have benefited, which is a feather in the cap of the Sharada Mahila Mandali.

The Mahila Mandali became a registered body in 2002 and in the same year it became a member of the Taluk Mahila Mandaligala Okkuta and took part in the taluk and district level programmes held specially for women. For the last 25 years the Mahila Mandali has engaged itself in holding socially relevant and other economic activities to empower women for the last 25 years. 2023 will be its 25th year in service of women.

Members of the Mahila Mandali also visit various old age homes, destitute homes and have engaged in the noble work of comforting and caring for the less fortunate souls in not just Chilimbi but also elsewhere in Mangaluru city.

Milestone

The Balakara Sharada Mahotsava Samithi has attained its golden jubilee in the in the year 2016 which is a milestone in the life of the Samithi. On this occasion we would like to put on record thousands of people, young and old, men and women who have contributed to the success of the various activities and to the growth of the organisation in the last 56 years. We also pray to Sharada Mata our presiding deity to grant health and wealth of knowledge to all those who have worked zealously.

The Balakara Sharada Mahotsava Samithi has attained its golden jubilee in the in the year 2016 which is a milestone in the life
For the last 56 years we have traversed through difficult times too but the grace of goddess Sharada always blessed our way and rid the hurdles we faced. We are sure she will continue to guide us through the joys and tribulations and bless us all with her benevolent benedictions.

Our Vision

The BSSM TRUST has a unique VISION which aims at empowerment of youth and women in cultural, educational and social aspects. Navrathri related celebrations are carried out with pomp and grandeur by forming balakara Sharada mahostava samithi.The trust has started a kinder Garten school named shri sharada vidyanikethana nusary school, Where a number of batches of children have been given education. The trust has also taken the initiative to organize the women and started shri sharada Mahila Mandali. The Mandali now takes up many programmes to empower women socially and economically. After a permanent abode was developed the performance of activities related to different aspects of the society has gained a boost. The building ‘Sharada Nikethan’ has made it convenient to unite people to take part in popular projects like Swachh Bharath and Sarva Shiksha Abhiyan or to conduct service oriented programmes in order to extend helping hand for the ailing, the poor and the needy.

Our Mission and Goal

The trust has aimed at achieving a transformation of society which is characterized by civic knowledge, environmental awareness, health and fitness awareness and protection of culture and religion. Our motto is “service to humanity is service to god”.

ಬಾಲಕರ ಶ್ರೀ ಶಾರದಾ ಮಹೋತ್ಸವ ಸಮಿತಿ ನಡೆದು ಬಂದ ಹಾದಿ ಒಂದು ಹಿನ್ನೋಟ

1967ನೇ ಇಸವಿ ನವರಾತ್ರಿಯ ಪರ್ವಕಾಲದಲ್ಲಿ ಉದಯವಾದ ಈ ನಮ್ಮ ಸಂಸ್ಥೆಯು ಪ್ರಾರಂಭದಲ್ಲಿ ಉರ್ವ ಚಿಲಿಂಬಿಯ “ಗುರುಕೃಪಾ” ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಭಿಮನ್ಯು ಶಾಖೆಯ ಮೂಲಕ ಅಸ್ತಿತ್ವಕ್ಕೆ ಬಂತು. ಶಾಖೆಗೆ ಬರುವ ಹಲವು ಕಿರಿಯ ಮಕ್ಕಳು ಸೇರಿಕೊಂಡು ಶ್ರೀ ಶಾರದಾ ಮಾತೆಯನ್ನು ಆರಾಧಿಸಿಕೊಂಡು ಬರುವ ದಿವ್ಯ ಇರಾದೆಯೊಂದಿಗೆ ಆರಂಭವಾದ ಈ ಸಂಸ್ಥೆ ಗುರುಕೃಪಾ ಕಂಪೌಂಡಿನ ಹಟ್ಟಿಯಲ್ಲಿ ಜನ್ಮ ತಾಳಿತು. ಇದು ಆಗಿನ ಮಕ್ಕಳಲ್ಲಿ ಹುದುಗಿರುವ ಶ್ರದ್ಧಾ ಭಕ್ತಿಗೆ ಸಾಕ್ಷಿಯಾಯಿತು, ಆರಂಭದಲ್ಲಿ ಶ್ರೀ ಶಾರದಾ ಮಾತೆಯ ಪೊಟೋವನ್ನಿಟ್ಟು ಪೂಜಾ ಕೈಂಕರ್ಯವನ್ನು ಮಾಡಿಕೊಂಡು ಆರಾಧಿಸಿದ ಆ ಕಿರಿಯ ಮಕ್ಕಳಲ್ಲಿ ಭಕ್ತಿಯನ್ನು ಹುರಿದುಂಬಿಸಲಾಯಿತು. ದೇವರ ನಾಮಗಳ ಪಾರಾಯಣ, ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯೆಯ ಆಧಿನಾಯಕಿ ಶಾರದಾ ಮಾತೆಯನ್ನು ಆರಾಧಿಸಲಾರಂಭಿಸಿದರು. ಚಿಕ್ಕ ಮಕ್ಕಳ ಈ ಶ್ರದ್ಧಾಭಕ್ತಿಗೆ ಬೆನ್ನೆಲುಬಾಗಿ ನಿಂತವರು ಸ್ಥಳೀಯ ಹಿರಿಯರು, ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯಲು ಪ್ರೇರಕ ಶಕ್ತಿಯಾದರು.

ಹಿರಿಯರ ನಿರಂತರ ಪ್ರೋತ್ಸಾಹ, ಬೆಂಬಲದೊಂದಿಗೆ ಚಿಲಿಂಬಿಯಲ್ಲಿ ಶ್ರೀ ಶಾರದಾ ಮಾತೆಯ ದಿವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾರದಾ ದೇವಿಯ ಆರಾಧನೆಯನ್ನು ನವರಾತ್ರಿಯ ವೇಳೆಯಲ್ಲಿ ಹಮ್ಮಿಕೊಳ್ಳಲಾಯಿತು. ಹಿರಯರ ಸಲಹೆಯಂತೆ ಚಿಕ್ಕ ಮಕ್ಕಳು ಪ್ರಾರಂಭಿಸಿದ ಶಾರದಾ ದೇವಿಯ ಆರಾಧನೆಯನ್ನು “ ಬಾಲಕರ ಶಾರದೆ” ಎಂದು ಹೆಸರಿಸಲಾಯಿತು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು, ಬಾಲಕರ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ”ಯನ್ನು ರಚಿಸಲಾಯಿತು. ನೂರಾರು ಹಿರಿಯ ಕಿರಿಯ ಸದಸ್ಯರನ್ನು ಹೊಂದಿದ ಈ ಸಮಿತಿ ಮುಂದಕ್ಕೆ ಒಂದು ಶಕ್ತಿಯಾಗಿ ಬೆಳೆದು ನಿಂತು ಒಂದು ಸಂಸ್ಥೆಯಾಗಿ ರೂಪುಗೊಂಡು, ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡು ಭಗವದ್ಭಕ್ತರಲ್ಲಿ ವಿದ್ಯೆ, ಶ್ರದ್ಧಾಭಕ್ತಿ ಬೆಳೆಸುವಲ್ಲಿ ಯಶಸ್ಸು ಪಡೆಯಿತು.

ಹೃದಯ ಭಾಗದಲ್ಲಿ ತಲೆಎತ್ತಿ ನಿಂತಿರುವ ಶ್ರೀ ಶಾರದಾ ನಿಕೇತನ ಸಂಸ್ಥೆಯ, ನಮ್ಮ ಕೆಲಸ ಕಾರ್ಯಗಳನ್ನು ಗಮನಿಸಿದ ದಾನಿಗಳು ಶಾರದಾ ದೇವಿಯ ಆರಾಧನೆಗೆಂದು 2 1/2 ಸೆಂಟ್ಸ್ ಸ್ಥಳವನ್ನು ದಾನಮಾಡಿ ಇಲ್ಲಿ ಭವ್ಯವಾದ ಕಟ್ಟಡ ನಿರ್ಮಾಣಮಾಡಲು ನೆರವಾದರು. 1996ರಲ್ಲಿ ಶಂಕು ಸ್ಥಾಪನೆಗೊಂಡ ಈ ಕಟ್ಟಡವು ಊರ ಪರವೂರ ದಾನಿಗಳ ನೆರವಿನಿಂದ ಬಹು ಬೇಗ ನಿರ್ಮಾಣವಾಗಿ ಹತ್ತು ಹಲವು ಕಾರ್ಯಕ್ರಮಗಳ ಅನಾವರಣಕ್ಕೆ ಸಾಕ್ಷಿಯಾಯಿತು.
ಇನ್ನು ನಾವು ಶಾರದಾ ನಿಕೇತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ತಮ್ಮ ಸಂತಸ ವ್ಯಕ್ತಪಡಿಸಿದ ಗಳಿಗೆಯಂತೂ ನಮಗೆ ಚಿರಸ್ಮರಣೀಯವಾಗಿದೆ. ಉದ್ಘಾಟನ ಭಾಷಣದಲ್ಲಿ ಧರ್ಮಾಧಿಕಾರಿಗಳು ನೀಡಿದ ಸಲಹೆ ನಾವು ಅಕ್ಷರಶಃ ಪಾಲಿಸಿದ ಹೆಮ್ಮೆ ನಮಗಿದೆ. ಈ ಸಂಸ್ಥೆ ಬಾಲಕರ ಸಂಸ್ಥೆ. ಶ್ರೀ ಶಾರದಾ ಪೂಜೆ ಬಾಲಕರಿಂದ ಆರಂಭವಾಗಿದೆ. ಇದರ ಎಲ್ಲಾ ಕೆಲಸ ಕಾರ್ಯಗಳನ್ನು ಬಾಲಕರೇ ನಡೆಸಿಕೊಂಡು ಬರುತ್ತಾರೆ. ಆದುದರಿಂದ ನೀವೆಲ್ಲರೂ ಕೂಡ ಮಕ್ಕಳಿಗೆ ಬೇಕಾದಂತಹ ಇದರ ಅಭಿವೃದ್ದಿಗೆ, ಅವರ ಉನ್ನಿತಿಗಾಗಿ ಅವಶ್ಯಕತೆಯುಳ್ಳ ವಿದ್ಯಾಕೇಂದ್ರವನ್ನು ಸ್ಥಾಪಿಸಬೇಕು. ಆ ನಿಟ್ಟಿನಲ್ಲಿ ತಾವು ಈ ಕಟ್ಟಡವನ್ನು ಸದುಪಯೋಗಿಸಬೇಕೆಂದು ಸಲಹೆ ನೀಡಿದ್ದರು. ಧರ್ಮಾಧಿಕಾರಿಗಳ ಸಲಹೆಯಿಂದ ಪ್ರೇರಿತರಾದ ನಾವು ಆಸುಪಾಸಿನ ಪುಟ್ಟ ಮಕ್ಕಳು ನರ್ಸರಿ, ಕೆ.ಜಿ ಕ್ಲಾಸುಗಳಿಗೆ ದೂರದ ಶಾಲೆಗಳಿಗೆ, ಪ್ರಯಾಣಿಸುವುದನ್ನು ಅವರ ತಂದೆ ತಾಯಿಗಳು ಪಡುವ ಕಷ್ಟವನ್ನು ಗಮನಿಸಿ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ 1998ರ ಎಪ್ರಿಲ್ ತಿಂಗಳಲ್ಲಿ ಶ್ರೀಶಾರದಾ ವಿದ್ಯಾನಿಕೇತನ ನರ್ಸರಿ ಶಾಲೆಯನ್ನು ಆರಂಭಿಸಿದೆವು.

ಹೀಗೆ ಶಾರದಾ ಮಾತೆಯ ಕಟ್ಟಡದಲ್ಲಿ ನಿತ್ಯ ವಿದ್ಯಾಭ್ಯಾಸ ನೀಡುವ ಕೆಲಸ ಆರಂಭವಾಯಿತು. ಊರವರ ಮುಕ್ತ ಪ್ರೋತ್ಸಾಹ, ಉತ್ತೇಜನದಿಂದಾಗಿ ಹಾಗೂ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳ ನಿಸ್ವಾರ್ಥ ಸೇವೆಯಿಂದಾಗಿ ಈ ವಿದ್ಯಾಸಂಸ್ಥೆಗೆ ಒಳ್ಳೆಯ ಹೆಸರು ಬಂದಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಪ್ರೋತ್ಸಾಹಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಮ್ಮ ಅಧ್ಯಾಪಕರಿಂದ ನಿತ್ಯ ನಡೆಯುತ್ತದೆ. ಯೋಗಾಭ್ಯಾಸ, ನೃತ್ಯ, ದೇವರ ನಾಮಗಳು, ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದಲ್ಲದೆ ಎಳವೆಯಲ್ಲಿಯೇ ದೇಶಪ್ರೇಮವನ್ನು ಮೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ನಾಯಕರುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಎಲ್ಲಾ ಜಾತಿಬಾಂಧವರ ಹಬ್ಬಗಳನ್ನು ಆಚರಿಸುವುದರೊಂದಿಗೆ ಹಬ್ಬಗಳ ಮಹತ್ವವನ್ನು ತಿಳಿಸಲಾಗುತ್ತದೆ. ನವರಾತ್ರಿ ದಿನಗಳಂದು ಶಾಲೆಯ ವಾರ್ಷಿಕೋತ್ಸವವನ್ನು ಏರ್ಪಡಿಸಿ. ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಅನಾವರಣ ಮಾಡಲಾಗುತ್ತದೆ.

ಹೀಗೆ ಈ ಭಾಗದಲ್ಲಿ ಒಂದು ರೀತಿಯ ಮೌಲ್ಯಯುತ ಜೀವನ ನಡೆಸುವ ಬಗ್ಗೆ ಸಚ್ಚಾರಿತ್ರವನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಕೆಲಸವನ್ನು ನಾವು ನಿರಂತರ ಮಾಡುತ್ತಿದ್ದೇವೆ.ನಂತರದ ದಿನಗಳಲ್ಲಿ ಒಂದು ಟ್ರಸ್ಟನ್ನು ರಚಿಸಿ ಮಹಿಳೆಯರ ಕೌಶಲ್ಯ ಶಕ್ತಿಯನ್ನು, ಸಂಘಟನಾ ಶಕ್ತಿಯನ್ನು ಪ್ರೇರೇಪಿಸಲು ಶ್ರೀಶಾರದಾ ಮಹಿಳಾ ಮಂಡಳಿಯನ್ನು ಕೂಡಾ ಆರಂಭಿಸಲಾಯಿತು. ಹಿರಿಯರ ಸಲಹಾ ಸಮಿತಿಯನ್ನು ರಚಿಸಲಾಯಿತು. 1998ನೇ ಜನವರಿ 25ರಂದು ಶಾರದಾ ನಿಕೇತನ ಕಟ್ಟಡದಲ್ಲಿ ಶ್ರೀ ಶಾರದಾ ಮಹಿಳಾ ಮಂಡಳಿಯು ಶ್ರೀಮತಿ ಎಂ ಸಾವಿತ್ರಿ ವಿಠ್ಠಲ್ ರಾವ್ ರವರಿಂದ ಉದ್ಘಾಟನೆಗೊಂಡು ಅಸ್ತಿತ್ವಕ್ಕೆ ಬಂತು. ಶ್ರೀ ಶಾರದಾ ಮಹಿಳಾ ಮಂಡಳಿಯು ಪ್ರತಿ ವರ್ಷ ಆಧ್ಯಾತ್ಮಿಕ, ಸಾಂಸ್ಕøತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹಲವಾರು ಆರೋಗ್ಯ ಸಂಬಂಧಿ ಶಿಬಿರ, ಯೋಗ ಶಿಬಿರ, ನೇತ್ರ ತಪಾಸಣೆ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಸ್ವದ್ಯೋಗಸ್ಥರಾಗುವಂತೆ ಉಚಿತ ಲಘು ಕೌಶಲ್ಯ ಆಧಾರಿತ ಕ್ಯಾಂಡಲ್ ತಯಾರಿಕೆ, ಸೋಪ್ ತಯಾರಿಕೆ, ಸೌಂದರ್ಯ ಪ್ರಸಾದನ, ಕೃತಕ ಆಭರಣ ತಯಾರಿಕೆ, ಹೊಲಿಗೆ ತರಬೇತಿ ಇದೇ ಮೊದಲಾದ ವೃತ್ತಿಪರ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ಚಿಲಿಂಬಿ ಮತ್ತು ಸುತ್ತಮುತ್ತಲಿನ ಹಲವಾರು ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ. ಇದು ಮಂಡಳಿಯ ಹೆಗ್ಗಳಿಕೆ.

ನಮ್ಮ ಮಂಡಳಿಯು 2002ರಲ್ಲಿ ನೋಂದಣಿಗೊಂಡು ಅದೇ ವರ್ಷದಲ್ಲಿ ತಾಲೂಕು ಮಹಿಳಾ ಮಂಡಲ ಒಕ್ಕೂಟದ ವಾರ್ಷಿಕ ಸಮಾರಂಭದಲ್ಲಿ ಪಾಲ್ಗೊಂಡಿರುವರು. ಮಂಡಳಿಯು ಸತತವಾಗಿ 25 ವರ್ಷಗಳ ದೀರ್ಘ ಕಾಲದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಪ್ರಸಕ್ತ 26ನೇ ವರ್ಷಕ್ಕೆ ಕಾಲಿಟ್ಟಿದೆ.ಸಂಘದ ಸದಸ್ಯರು ಪ್ರತಿ ವರ್ಷ ನಮ್ಮ ಪರಿಸರದ ಹಲವಾರು ಅನಾಥಾಶ್ರಮಗಳಿಗೆ ಭೇಟಿ ನೀಡುವುದರೊಂದಿಗೆ ಅನಾಥರಿಗೆ ಸಾಂತ್ವನ ತುಂಬುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಶಾರದಾ ಮಹಿಳಾ ಮಂಡಳಿಯು ಆದರ್ಶಪ್ರಾಯ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ನಿರಂತರವಾಗಿ ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀ ಶಾರದಾ ದೇವಿಯ ನಿರಂತರ ಆರಾಧನೆ ಮಾಡಿಕೊಂಡು ಬರುವ ನಮ್ಮ ಸಮಿತಿಯು ಸುವರ್ಣ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಸ್ಮರಣೀಯ ಸಂಗತಿ. ನಮ್ಮ ಸಮಿತಿಯ ಹತ್ತು ಹಲವು ಕಾರ್ಯಕ್ರಮಗಳಿಗೆ ಹಿರಿಯ, ಕಿರಿಯ ಸದಸ್ಯರುಗಳ ಪಾಲುಗೊಳ್ಳುವಿಕೆಯು ಸೇರಿದಂತೆ ಶ್ರೀ ಶಾರದಾ ದೇವಿಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶ್ರಮವಹಿಸಿ ದುಡಿದು ಯಶಸ್ಸಿಗೆ ಕಾರಣವಾಗಿರುತ್ತಾರೆ. ಅವರ ನಿಸ್ವಾರ್ಥ ಶ್ರದ್ಧಾ ಭಕ್ತಿಯ ಸೇವೆಯನ್ನು ಅತ್ಯಂತ ಗೌರವದಿಂದ ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ.ನಮ್ಮ ಯೋಚನೆಗಳು, ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಹತ್ತು ಹಲವು ಮಹನೀಯರ ಬೆಂಬಲ, ಪ್ರೋತ್ಸಾ ಹವನ್ನು ಸ್ಮರಿಸುತ್ತಾ ಅವರಿಗೆ ತಾಯಿ ಸರಸ್ವತಿ ಮಾತೆ ಸನ್ ಮಂಗಳವನ್ನು ಮಾಡಿ ಹರಸಲೆಂದು ಪ್ರಾರ್ಥಿಸುತ್ತೇವೆ.ಐವತ್ತು ವರ್ಷಗಳಲ್ಲಿ ನಾವು ಸಾಗಿ ಬಂದ ಹಾದಿ ಬಲು ಕಠಿಣವಾದರೂ, ಅದನ್ನು ಯಶಸ್ಸಿನೆಡೆಗೆ ಸಾಗಿಸುವಲ್ಲಿ ಆ ಮಹಾಮಾತೆಯ ಆಶೀರ್ವಾದದ ಬಲವೇ ಕಾರಣವಾಗಿದೆ. ನಿಮ್ಮ ಬೆಂಬಲ ಪ್ರೋತ್ಸಾಹ, ಆಶೀರ್ವಾದಗಳು ನಮ್ಮ ಸಂಸ್ಥೆಗೆ ಸದಾ ಇರಲಿ ಎಂಬ ಪ್ರಾರ್ಥನೆಯೊಂದಿಗೆ ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್ ಸಮಿತಿ(ರಿ.)